ಕರ್ನಾಟಕದಲ್ಲಿ ಹೆಚ್ಚುತ್ತಿರುವ HIV ಪ್ರಕರಣಗಳು:

ಕರ್ನಾಟಕದಲ್ಲಿ ಹೆಚ್ಚುತ್ತಿರುವ HIV ಪ್ರಕರಣಗಳು: ಯುವಕರಲ್ಲೇ ಸೋಂಕು ಹೆಚ್ಚು, ಕಾರಣ ತಿಳಿದರೆ ಬೆಚ್ಚಿಬೀಳ್ತೀರಿ!

 

ಬೆಂಗಳೂರು: ರಾಜ್ಯದಲ್ಲಿ ಹೆಚ್‌ಐವಿ/ಏಡ್ಸ್‌ (HIV/AIDS) ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ವಿಶೇಷವಾಗಿ ಯುವಜನರಲ್ಲಿ ಸೋಂಕು ಹರಡುವಿಕೆ ಹೆಚ್ಚುತ್ತಿರುವುದು ಆತಂಕವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (KSAPS) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳು ಈ ಬೆಳವಣಿಗೆಯನ್ನು ಸ್ಪಷ್ಟಪಡಿಸುತ್ತಿವೆ.

 

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪುರುಷರ ನಡುವಿನ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ HIV ಸೋಂಕಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ ಎಂದು ವರದಿಯಾಗಿದೆ. ಕಾಲೇಜು ವಿದ್ಯಾರ್ಥಿಗಳು, ಯುವ ವೃತ್ತಿಪರರು ಹಾಗೂ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಸೋಂಕು ಪತ್ತೆಯಾಗುತ್ತಿರುವ ಪ್ರಮಾಣ ಹೆಚ್ಚುತ್ತಿರುವುದು ಆರೋಗ್ಯ ತಜ್ಞರ ಕಳವಳಕ್ಕೆ ಕಾರಣವಾಗಿದೆ.

 

ಮೊದಲು HIV ಎಂದರೇನು ?

HIV ಎಂದರೆ ಹ್ಯೂಮನ್ ಇಮ್ಯುನೊಡಿಫಿಷಿಯನ್ಸಿ ವೈರಸ್ (Human Immunodeficiency Virus). ಇದು ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲೆ ದಾಳಿ ಮಾಡಿ, ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದುರ್ಬಲಗೊಳಿಸುವ ವೈರಸ್ ಆಗಿದೆ.

ಮಾನವ ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV) ನಿಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಒಂದು ರೀತಿಯ ವೈರಸ್ ಆಗಿದೆ . ಇದು ಕ್ರಮೇಣ CD4 ಎಂದು ಕರೆಯಲ್ಪಡುವ ಒಂದು ರೀತಿಯ ರೋಗನಿರೋಧಕ ಕೋಶವನ್ನು ನಾಶಪಡಿಸುತ್ತದೆ. ಈ ಜೀವಕೋಶಗಳು ರೋಗದ ವಿರುದ್ಧ ಹೋರಾಡುವ ಮೂಲಕ ನಿಮ್ಮ ದೇಹವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

 

ಚಿಕಿತ್ಸೆ ಪಡೆಯದ HIV ಸೋಂಕು 10 ವರ್ಷಗಳ ಒಳಗೆ, ಹೆಚ್ಚಾಗಿ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (AIDS) ಗೆ ಪರಿವರ್ತನೆಯಾಗಬಹುದು.

 

ಯುವಕರಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವೇನು?

ತಜ್ಞರ ಪ್ರಕಾರ, ಸುರಕ್ಷಿತ ಲೈಂಗಿಕತೆಯ ಬಗ್ಗೆ ಸರಿಯಾದ ಅರಿವಿನ ಕೊರತೆ, ನಿಯಮಿತ ಆರೋಗ್ಯ ತಪಾಸಣೆಗೆ ನಿರ್ಲಕ್ಷ್ಯ ಮತ್ತು ಅಪಾಯದ ಬಗ್ಗೆ ಜಾಗೃತಿಯ ಅಭಾವ ಪ್ರಮುಖ ಕಾರಣಗಳಾಗಿವೆ. ಹಲವರು ಸೋಂಕಿನ ಲಕ್ಷಣಗಳು ಕಾಣಿಸದ ಕಾರಣ ಪರೀಕ್ಷೆ ಮಾಡಿಸಿಕೊಳ್ಳುವುದನ್ನೇ ಮುಂದೂಡುತ್ತಿದ್ದಾರೆ.

HIV ಸೋಂಕು ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳನ್ನು ತೋರಿಸದೇ ಇರಬಹುದು. ಇದರಿಂದ ಸೋಂಕು ಹೊಂದಿರುವವರು ಅರಿವಿಲ್ಲದೆ ಇತರರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ಇದೇ ಕಾರಣದಿಂದ ಆರೋಗ್ಯ ಇಲಾಖೆ ನಿಯಮಿತ ಪರೀಕ್ಷೆಯ ಮಹತ್ವವನ್ನು ಒತ್ತಿ ಹೇಳುತ್ತಿದೆ.

HIV ರೋಗದ ಲಕ್ಷಣಗಳು ಯಾವುವು ?

1) ಶ್ರಮ ಪಡದೆ ಆಯಾಸ್ವಾಗುವದು.

2) ಮೈ ಬೆಚ್ಚಗೆ ಆಗುವದು (ಜ್ವರ).

3) ತಲೆ ನೋವುವದು.

4) ಗಂಟಲಲ್ಲಿ ನೋವು ಕಾಣಿಸುವುದು.

5) ಕೀಲು ಮತ್ತು ಸ್ನಾಯುವಿನಲ್ಲಿ ನೋವು ಕಾಣಿಸುವುದು.

ಲಕ್ಷಣಗಳು ಸಾಮಾನ್ಯವಾಗಿ ಕಾಣುತ್ತವೆ ಅದನ್ನು ನಿರ್ಲಕ್ಷಿಸಿ ಹಾಗೆ ಇದ್ದರೆ ಸೋಂಕು ಹರಡಿ ಮುಂದಿನ ಹಂತಕ್ಕೆ ಹೋಗುತ್ತದೆ ಅವಾಗ್ ಕಾಯಿಲೆಯನ್ನು ಗುಣಮಾಡಲು ಕಷ್ಟ ಆಗ್ಬಹುದು.

ನೀವು ನಿರ್ಲಕ್ಷ ಮಾಡಿ ಚಿಕಿತ್ಸೆ ಪಡೆಯದಿದ್ದರೆ , ಸಮಯ ಕಳೆದ ಹಾಗೆ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು

1) ಹಸಿವು ಆಗದೆ ಇರುವುದು.

2) ಮೈ ಭಾರ ಕಡಿಮೆ ಆಗುವುದು.

3) ಅತಿಸಾರ.

4) ಯಾವಾಗ್ಲೂ ಆಲಸ್ಯ ಮಾಡುವದು.

5) ಜ್ವರ

 

AIDS ಇಂದ ಆಗುವ ದುಷ್ಪರಿಣಾಮಗಳು ಏನು?

ನೀವು ಈ ರೋಗದಿಂದ ಬಳಲುತ್ತಿದ್ದರೆ , ನಿಮ್ಮ ರೋಗನಿರೋಧಕ ಶಕ್ತಿ ಕಡಿಮೆ ಆಗುತ್ತದೆ, ಮತ್ತು ಯಾವುದೇ ಕೆಲಸ ಮಾಡಲು ನಿಮಗೆ ಉತ್ಸಾಹ ಇರುವುದಿಲ್ಲ.

ಸಾಮಾನ್ಯವಾಗಿ ಜನರಿಗೆ ಕಾಣಿಸಿಕೊಳ್ಳಲಾರದ ರೋಗಗಳು ನಿಮ್ಮಲ್ಲಿ ಕಾಣುತ್ತವೆ

ಉದಾಹರಣೆಗೆ : ಮೆದುಳಿನ ಸೋಂಕು ( meningitis) , ಕ್ಷಯ ( TB), ಮೂತ್ರಪಿಂಡ ರೋಗ , ಬುದ್ಧಿಮಾಂದ್ಯ, ವಾಸ್ಟಿಂಗ್ ಸಿಂಡ್ರೋಮ್ (wasting syndrome- ಅಂದ್ರೆ ಅರಿವಿಲ್ಲದೆ ತೂಕ ಕಡಿಮೆ ಆಗುವುದು, ಆಗಾಗ ಜ್ವರ ಬರುವುದು)

ಮತ್ತು ಗರ್ಭಿಣಿ ಮಹಿಳೆಯರಲ್ಲಿ ಕಂಡು ಬಂದರೆ ಗರ್ಭಕಂಠದ ಕ್ಯಾನ್ಸರ್ ಬರಬಹುದು . ಅದಕ್ಕಾಗಿ ಜಾಗೃತೆಯಿಂದ ಇರಬೇಕು.

 

KSAPS ನಿಂದ ವಿಶೇಷ ಜಾಗೃತಿ ಅಭಿಯಾನ

ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ KSAPS ಹಲವು ಹೊಸ ಕ್ರಮಗಳನ್ನು ಕೈಗೊಂಡಿದೆ. ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳು ಮತ್ತು ಉಚಿತ HIV ಪರೀಕ್ಷಾ ಸೌಲಭ್ಯಗಳನ್ನು ಆರಂಭಿಸಲಾಗಿದೆ.

 

ಇದರ ಜೊತೆಗೆ, ಅಪಾಯದ ಗುಂಪಿನ ಜನರಿಗೆ ಸುಲಭವಾಗಿ ಮಾಹಿತಿ ಹಾಗೂ ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ‘ಬ್ರೇಕ್‌ಫ್ರೀ’ (Break Free) ಎಂಬ ಮೊಬೈಲ್ ಆ್ಯಪ್‌ನ್ನೂ ಪರಿಚಯಿಸಲಾಗಿದೆ. ಈ ಆ್ಯಪ್ ಮೂಲಕ HIV ಪರೀಕ್ಷೆ, ಕೌನ್ಸೆಲಿಂಗ್ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು.

 

ಉಚಿತ ಪರೀಕ್ಷಾ ಶಿಬಿರಗಳಿಗೆ ಉತ್ತಮ ಪ್ರತಿಕ್ರಿಯೆ

ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ನಡೆಸಲಾಗುತ್ತಿರುವ ಉಚಿತ HIV ಪರೀಕ್ಷಾ ಶಿಬಿರಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಆರಂಭಿಕ ಹಂತದಲ್ಲೇ ಸೋಂಕು ಪತ್ತೆಯಾದರೆ ಚಿಕಿತ್ಸೆ ಮೂಲಕ ಸಾಮಾನ್ಯ ಜೀವನ ನಡೆಸಲು ಸಾಧ್ಯವಿದೆ.

ಆದ್ದರಿಂದ ಅಪಾಯದ ಸಾಧ್ಯತೆ ಇರುವವರು ಯಾವುದೇ ಮುಜುಗರವಿಲ್ಲದೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

 

ಸೋಂಕು ತಡೆಗಟ್ಟಲು ಏನು ಮಾಡಬೇಕು?

HIV ಸೋಂಕು ತಡೆಗಟ್ಟಲು ಸುರಕ್ಷಿತ ಲೈಂಗಿಕ ಪದ್ಧತಿಗಳನ್ನು ಅನುಸರಿಸುವುದು ಅತ್ಯಂತ ಮುಖ್ಯ. ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ, ಜಾಗೃತಿ ಮತ್ತು ವೈದ್ಯಕೀಯ ಸಲಹೆಗಳನ್ನು ಪಾಲಿಸುವುದರಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.

ಆರೋಗ್ಯ ತಜ್ಞರ ಅಭಿಪ್ರಾಯದಂತೆ, HIV ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ವೈಜ್ಞಾನಿಕ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಯುವಜನರು ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಿದರೆ ಸೋಂಕಿನ ಪ್ರಮಾಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ರಾಜ್ಯದಲ್ಲಿ HIV ಪ್ರಕರಣಗಳ ಏರಿಕೆ ಆರೋಗ್ಯ ಕ್ಷೇತ್ರಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಸರ್ಕಾರ, ಆರೋಗ್ಯ ಸಂಸ್ಥೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಈ ಸವಾಲನ್ನು ಎದುರಿಸಲು ಸಾಧ್ಯವಾಗಲಿದೆ.

 

ಪಾಲಕರಿಗೆ ಸಂದೇಶ

ಮೊದಲು ಪಾಲಕರು ಈ ಸೋಂಕಿನ ಬಗ್ಗೆ ಎಲ್ಲ ಮಾಹಿತಿ ಹೊಂದಿರಬೇಕು , ಗೊತ್ತಿಲ್ಲ ಅಂದರೆ ಹಲವಾರು ಮಾಧ್ಯಮದಿಂದ ತಿಳಿದುಕೊಳ್ಳಬೇಕು. Parenting ಅನ್ನೋದು ಬಹಳ ಮುಖ್ಯ ಅದರಲ್ಲೂ ಈ ಮಾಡರ್ನ್ ಲೋಕದಲ್ಲಿ , ನಮ್ಮ ಮಕ್ಕಳು ಯಾವಾಗ ಎಲಿ ತಪ್ಪು ಮಾಡುತ್ತಾರೆ ಎಂಬುದು ಬಹಳ ಸೂಕ್ಷ್ಮವಾಗಿ ಗಮನಿಸಬೇಕು , ಅವರನ್ನು ಒಳ್ಳೆ ಸಂಸ್ಕಾರದಿಂದ ಬೆಳೆಸುವುದೇ ನಿಮ್ಮ ಗುರಿಯಾಗಬೇಕು. ನೀವು ಎಲ್ಲವನ್ನೂ ತಿಳಿದಿದ್ದರೆ ಮಾತ್ರ ನಿಮ್ಮ ಮಕ್ಕಳನ್ನು ತಿಳಿಸಿ ಒಳ್ಳೆ ಮನುಷನ್ನಾಗಿ ಮಾಡಬಹುದು .

 

ಕೊನೆಯ ಮಾತು 

ಅದಕ್ಕಾಗಿ HIV ಅಥವಾ AIDS ಕಾಯಿಲೆ ಬಗ್ಗೆ ಶಾಲೆ ಅಲ್ಲಿಯೇ ಏನು ಮುಜುಗರ ಪಡದೆ ಪಾಠವನ್ನು ಮಾಡಬೇಕು, ಮಕ್ಕಳಿಗೆ ಮೊದಲೇ ಅದರ ಅರಿವು ಇದ್ದರೆ ಅವರು ತಮ್ಮ ಜೀವನದಲ್ಲಿ ಎಡುವುದಿಲ್ಲ , ಮಕ್ಕಳು ಕಲಿತರೆ ದೇಶ ಕಲತಂತೆ ಅನ್ನೋ ಗಾದೆ ಸರಿಯಾಗಿ ಇದೆ . ಎಲ್ಲರೂ ಎಲ್ಲವನ್ನೂ ಅರಿತು ಈ ಸಮಾಜದಲ್ಲಿ ಬೆಳೆಯಬೇಕು ಎಂದು ಆಶಯಿಸುತ್ತೆನೆ.

 

Exit mobile version